Monday, November 9, 2009

Corporate ಕಾಡಿನಲ್ಲಿ ಅನಾಥ ಪ್ರಜ್ಞೆ..

ಬಹಳ ದಿನಗಳಿಂದ ಇದರ ಬಗ್ಗೆ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಹೇಗೆ, ಯಾವಾಗ ಅಂತ ನಿರ್ಧಾರ ಮಾಡಿರಲಿಲ್ಲ. ಇವತ್ತು ಕಾಲ ಕೂಡಿ ಬಂದಿದೆ.

ಈ CORPORATE WORLD ನಲ್ಲಿ ನನಗೆ ತುಂಬ ಅನಾಥ ಪ್ರಜ್ಞೆ ಕಾಡುತ್ತೆ. ಇಲ್ಲಿರುವವರೆಲ್ಲ ಬೇರೆಯೇ ತರಹ, ಬೇರೆಯ ಜಗತ್ತಿನವರು ಅಂತ ಯಾವಾಗಲೂ ಅನ್ನಿಸುತ್ತಿರುತ್ತೆ. ಮೇಲೆ ಬರಬೇಕು ಅಂದರೆ ಇಲ್ಲಿ ಬರಿಯ ಶ್ರದ್ಧೆ ಸಾಲದು. ಜನರನ್ನು ಮೆಚ್ಚಿಸಬೇಕು. ದೇವರನ್ನು ಮೆಚ್ಚಿಸುವಂತೆ ಕೆಲಸ ಮಾಡುತ್ತೇವೋ ಇಲ್ಲವೋ, ನಮ್ಮ ಮೇಲಿನವರನ್ನು ಮಾತ್ರ ಯಾವಾಗಲೂ ಒಳ್ಳೆಯ ರೀತಿಯಲ್ಲಿ ಇಟ್ಟುಕೊಂಡಿರಬೇಕು.. ಹೀಗೆ ಏನೇನೋ ನಿಯಮಗಳು ಇಲ್ಲಿ.

ಕೆಲಸ ಮಾಡುವುದಕ್ಕಿಂತ ಮಾಡುತ್ತೀನಿ ಅನ್ನುವ impression ಜಮಾಯಿಸೋದು ತುಂಬಾ ಮುಖ್ಯ ಅಂತ ಮುಕ್ಕಾಲು ಪಾಲು ಜನ ಹೇಳುತ್ತಾರೆ. People judge a book by its cover.. that is why gifts are gift wrapped ಅಂತ ಮೊನ್ನೆ ಮೊನ್ನೆ ಎಲ್ಲೋ ಓದಿದೆ. ಇದೆಲ್ಲ ನಿಜ ಅಂತ ನನ್ನ ಸ್ವಂತ ಅನುಭವ ಕೂಡ. ಆದರೆ ಬರೀ gift wrapper ನೋಡಿ ಕೊಂಡವರಿಗೆ ಯಾವಾಗಲೂ ಮೋಸ ಕಟ್ಟಿಟ್ಟ ಬುತ್ತಿ ಅನ್ನೋದು ನಿಜವಲ್ಲವೆ?

ಬರೀ ತೋರಿಕೆಯೇ ಮುಖ್ಯವಾದರೆ ಮಾಡುವ ಕೆಲಸಕ್ಕೆ ಬೆಲೆಯೇ ಇಲ್ಲವೇ ಅಂತ ಬಹಳಷ್ಟು ಬಾರಿ ನನ್ನನ್ನೇ ಕೇಳಿಕೊಂಡಿದ್ದೇನೆ. "This is corporate world ಮರಿ" ಅಂತ ನಕ್ಕಿದ್ದಾರೆ ಎಲ್ಲರೂ. ಆದರೂ ಅದಷ್ಟೇ ಮುಖ್ಯ ಅಲ್ಲ ಅಂತ ಮೊನ್ನೆ ಮೊನ್ನೆ ಒಂದು ಘಟನೆ ತೋರಿಸಿಕೊಟ್ಟಿತು. ಯಾವುದೋ ಒಂದು ಮೀಟಿಂಗ್ ನಲ್ಲಿ ನಾನು ಮಾತನಾಡಿದ್ದು ನೇರವಾಗಿತ್ತು ಮತ್ತು ಆ ನೇರ ನುಡಿ ಒಳ್ಳೆಯದನ್ನೇ ಮಾಡಿತು ಅಂತ ನನಗೆ ಯಾರೋ ಒಬ್ಬರ ಶಹಭಾಶ್ ಗಿರಿ ಕೊಟ್ಟಿದ್ದಾರೆ :). ಎಷ್ಟೋ ಬಾರಿ ಬರುವ increment, ಬಡ್ತಿಗಿಂತ ಜನರ ಉತ್ತೇಜಿಸುವಂತಹ ಒಂದೆರಡು ನುಡಿಗಳು ತುಂಬಾ ಸಂತೋಷ ಕೊಡುತ್ತದೆ. Where ever you are, do your best and leave the rest to GOD ಅನ್ನೋದು ಸರಿಯಾದ ಮಾತು. ಬಡ್ತಿ ನಿಧಾನವಾಗಿ ಬರಲಿ. ಆದರೆ ಮಾಡುವ ಕೆಲಸ ಮನಸ್ಸಿಗೆ ನೆಮ್ಮದಿ, ಸಂತೋಷ ತರಲಿ ಅನ್ನೋದು ನನ್ನ ಅನಿಸಿಕೆ. ಏನಂತೀರಿ?

1 comment:

  1. ಮೊದ ಮೊದಲು ಈ Corporate World ಗೆ ಬ೦ದಾಗ, ಅ೦ದ್ರೆ ಹೊಸತಾಗಿ ಆಗ್ ತಾನೆ ಕಾಲೇಜ್ ಮುಗಿಸಿ ನಾವೆಲ್ಲ ಈ ಕಾಡಿನಲ್ಲಿ ಪೂರ್ತಿಯಾಗಿ ಕಳೆದು ಹೋಗದ ದಿನಗಳಲ್ಲಿ, ಪ್ರತಿ ದಿನ (ಅಥವ ವಾರಕ್ಕೆ ಮೂರು ಸರಿ ತಪ್ಪದೆ) ನಾವೆಲ್ಲ ಕ್ಲಾಸ್ ಮೇಟ್ಸ್ ಸೇರಿಕೊ೦ಡು ಹರಟೆ ಹೊಡೆಯೊದೊ ಅಥವ ಚಲನಚಿತ್ರಕ್ಕೊ ಅಥವಾ ಸುಮ್ನೆ ಅಲ್ಲಿ ಇಲ್ಲಿ ತಿರುಗಾಡೊಕ್ಕೆ ಹೊಗ್ತ ಇದ್ದದ್ದು ಇನ್ನೂ ನೆನಪಿದೆ. ಹೊಸ ಜಗತ್ತಿಗೆ ಬಿರುಸಾಗಿ ನುಗ್ಗುವ ಹ೦ಬಲ ಎಲ್ಲರಿಗೂ ಇತ್ತಾದರೂ, ಮರಳಿ ಸ್ನೇಹಿತರ ಹತ್ತಿರ ಹೋಗಿ ನಮ್ಮ ಪ್ರತಿ ದಿನದ so called, corporate ಕಾದಿನ ಅನುಭವಗಳನ್ನ ಎಲ್ಲರೊ೦ದಿಗೆ ಹ೦ಚಿಕೊಳ್ಳುತ್ತಿದ್ದೆವು.

    ಮ್ ಮ್ ..ಎಷ್ಟು ವಷ್ರಗಳು ಕಳೆದು ಹೋದವು....ಹೇಗೊ...!! ಗೊತ್ತಿಲ್ಲ....
    ನಾವೆಲ್ಲ ಕೂಡ ಬದಲಾದೆವು, "ಹೇಗೊ?" ಅನ್ನೊಕೆ ಮನಸಾಗೊಲ್ಲ, ನನಗೂ ಗೊತ್ತು ನಾನು ಹೇಗೆ ಬದಲಾದೆ, ಅಥವ ಬದಲಾದವರ ಥರ ವರ್ತಿಸಿದೆ ಅ೦ತ. ಬಹುಶ್ಃ ನೀವು ಹೇಳುತ್ತಿರುವ ಕಾಡಿನಲ್ಲಿ ಕಳೆದು ಹೋಗೊದು ಅ೦ದ್ರೆ ಇದೇ ಇರಬೇಕು.
    ಮರಳಿ ಮೊದಲಿಗೆ ಹೋಗೊಕಾಗುತ್ತಾ..!! ವಿಚಾರ ಮಾಡ್ತಿರ್ತೀನಿ...

    ReplyDelete