Sunday, November 14, 2010

ಕನಸು ಅನ್ನೋದು...

ಕನಸು ಅನ್ನೋದು ಏನು ಹೇಳಿ? ಅದು ರಕ್ತಬೀಜಾಸುರನ ಮಯ್ಯೊಳಗಿನ ರಕ್ತವಿದ್ದ ಹಾಗೆ. ಇವತ್ತು ಒಂದು ಆಸೆ. ಇವತ್ತಿನ ಆಸೆ ನಾಳೆಯೂ ಇರುತ್ತೆ ಅನ್ನೋದು ಸುಳ್ಳು. ಆ ಕ್ಷಣದಲ್ಲಿ ಇವತ್ತು ಈ ಕನಸು ನನಸಾಗದಿದ್ದರೆ ಬದುಕು ಇದೆಯೋ ಅನ್ನೋ ಹಾಗಿರುತ್ತೆ. ಆಸೆ ಹುಟ್ಟಿ ಹುಟ್ಟಿ, ಕಳೆದು ನಿರಾಸೆ ಆಗಿ ನಾಳೆ ಬದುಕೇ ಇಲ್ಲ, ಎಲ್ಲ ಕಳೆದು ಹೋಯಿತು ಅಂತ ರಂಪಾಟ ಮಾಡುವ ಮನಸ್ಸು ಬೆಳಕು ಹರಿಯೋದರೊಳಗೆ ಹೊಸ ಕನಸನ್ನು ಹೊಸೆದಿರುತ್ತೆ - ನಮ್ಮ ದೊಡ್ದು ಮಾಡುತ್ತಿದ್ದ ಹತ್ತಿಯ ಬತ್ತಿಯ ಹಾಗೆ. ಮತ್ತೆ ಅದೇ ಕಥೆ.

ಎಷ್ಟೋ ಬಾರಿ ನನ್ನ ಡೈರಿಯ ಹಳೆಯ ಪುಟಗಳನ್ನು ತಿರುವಿದರೆ ಇದು ನನ್ನ ಕನಸಾಗಿದ್ದು ಹೌದೇ ಅನ್ನುವಷ್ಟು ಮರೆತೇ ಹೋಗಿರುತ್ತೆ. ಹುಚ್ಚು ಮನಸ್ಸು ಅಂತ ನಕ್ಕು ಸುಮ್ಮನಾಗುವಂತಾಗುತ್ತದೆ. ಹೀಗೆ ಮತ್ತೆ ಮತ್ತೆ ಸತ್ತು ಹುಟ್ಟುವ ಕನಸು ನಮ್ಮನ್ನು ಜೀವಂತವಾಗಿಡುವ ರೀತಿ ಅತ್ಯದ್ಭುತ!!