Monday, March 15, 2010

ಯುಗಾದಿಯ ಶುಭಾಶಯಗಳು

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಹೊಸ ವರ್ಷ ಎಲ್ಲರಿಗೂ ಹೊಸ ಹರ್ಷ ತರಲಿ.. ಕಡಿಮೆ ದುಃಖ ಇರಲಿ.. ನೋವು ಮರೆಯಲಿ. ನಲಿವು ಬೆಳೆಯಲಿ.. ಇದು ನನ್ನ ಹಾರೈಕೆ..

Friday, March 12, 2010

ಇದ್ದಕ್ಕಿದ್ದಂತೆ ಕಣ್ಮರೆಯಾದ ನಾನ್ಸಿಯ ನೆನಪಿನಲ್ಲಿ..

ನಮ್ಮ ಆಫೀಸಿನಲ್ಲಿ ಒಬ್ಬಳು ನನ್ನ ವಯಸ್ಸಿನ ಹುಡುಗಿ ಇದ್ದಕ್ಕಿದ್ದಂತೆ ಬದುಕಿಗೆ ಕೊನೆಯ ನಮಸ್ಕಾರ ಹಾಕಿ ಹೋಗಿಬಿಟ್ಟಳು. ಅವಳ ಜೊತೆ ನನ್ನ ಭೇಟಿ ಆಗಿದ್ದು ಕೆಲವೇ ದಿನಗಳ ಕೆಳಗೆ. ಆಫೀಸಿನಲ್ಲಿ ಎಲ್ಲರೂ ಸೇರಿ NGO Visitಗಾಗಿ ಹತ್ತಿರದ ಒಂದು ಶಾಲೆಗೆ ಹೋಗಿ ಅಲ್ಲಿ ಮಕ್ಕಳ ಜೊತೆ ಆಡಿ, ಆಡಿಸಿ ಬಂದೆವು. ಅದಕ್ಕಾಗಿ ನಾವೆಲ್ಲಾ ಸೇರಿ ಒಟ್ಟು 50 ಕ್ಕೂ ಹೆಚ್ಚು ಜನ ಇದ್ದೆವು. ಹೇಗೆ ಕಾರ್ಯಕ್ರಮಗಳು ನಡೆಯ ಬೇಕು ಎಂಬುದರ ಬಗ್ಗೆ ಒಂದು ಪ್ಲಾನ್ ಮಾಡಿದ್ದು ನಮ್ಮ ಒಂದು ಕಮಿಟಿ. ಅದರಲ್ಲಿ ಆಕೆಯೂ ಒಬ್ಬಳು. ಯಾವುದೇ ಅನಾರೋಗ್ಯದ ಸುಳಿವಿಲ್ಲದೆ, ನಮ್ಮಂತೆಯೇ ಇದ್ದ ಹುಡುಗಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ, Brain Dead ಎಂದು ಇಲ್ಲದಂತಾಗಿ ಹೋದಳೆಂದರೆ, ನಂಬಲಾಗದಂಥ ಮಾತು!!

ಅವಳ ಸಾವು ಒಂದು ಪ್ರಶ್ನೆಯನ್ನು ಮುಂದಿಟ್ಟು ನನ್ನನ್ನು ಕಾಡುತ್ತಿದೆ. ಸಾಯುವ ಎರಡು ದಿನ ಮೊದಲು promotion, increment ಅನ್ನು ನಮ್ಮಂತೆಯೇ, ಒಂದು ದೊಡ್ಡ ವಿಷಯದ ಹಾಗೆ ಚರ್ಚೆ ಮಾಡಿದ್ದಳು. ಸ್ವಲ್ಪ ಸಂಪಾದನೆಯಾಗಲಿ, ಸ್ವಲ್ಪ ಸಮಸ್ಯೆಗಳು ಕಳೆಯಲಿ, ಮನೆ ಮಾಡಿಕೊಳ್ಳೋಣ, ನಂತರ ನೆಮ್ಮದಿಯಾಗಿ ಇರೋಣ ಅಂತ ನಮ್ಮ ಹಾಗೆ ಇದ್ದಳೇನೋ!! ತನ್ನ ಕುಟುಂಬದ ಜೊತೆ ಈ ಕಡಿಮೆ ಅವಧಿಯಲ್ಲಿ ಎಷ್ಟು ಸಮಯ ಕಳೆದಿರಬಹುದು ಅವಳು? ಪ್ರತಿ ದಿನ ನಮ್ಮ 60% ಕ್ಕೂ ಹೆಚ್ಚು ಸಮಯ ಆಫೀಸ್, ಆಫೀಸಿಗೆ ಪ್ರಯಾಣ.. ತಯಾರಿ.. ಇದರಲ್ಲೇ ಕಳೆದುಹೊಗುತ್ತದಲ್ಲ.. ಏನು ಮಾಡುವುದು?

ನಾವೆಲ್ಲರೂ ಅಷ್ಟೇ.. ಇನ್ಯಾವತ್ತೋ ಖುಷಿಯಾಗಿರಲು ಇವತ್ತು ಕಷ್ಟ ಪಡುತ್ತೀವಿ. ಇನ್ಯಾವತ್ತೋ ಖುಷಿಯಾಗಿರಲು ನಾವೇ ಬದುಕಿರುತ್ತೀವೆಯೇ.. ನಿಜಯವಾಗಿಯೂ ಆ comfort level ನಾವು ತಲುಪಲು ಸಾಧ್ಯವೇ ಅನ್ನೋದು ಪ್ರಶ್ನೆ.. ಬದುಕಿನ ಎಷ್ಟೋ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಇರೋಲ್ಲ.. ಹುಡುಕುವ ಗೌಜಿಗೆ ನಾವು ಹೋಗೋದಿಲ್ಲ. ಇದೂ ಹಾಗೆ ಅನ್ನಿಸುತ್ತೆ..