Showing posts with label destiny.. ಗುರಿ = ಗಮ್ಯ. Show all posts
Showing posts with label destiny.. ಗುರಿ = ಗಮ್ಯ. Show all posts

Monday, October 5, 2009

ತಲುಪಿದ್ದೇನೆಲ್ಲಿಗೆ?

ಎಲ್ಲಿಂದ ಹೊರಟು
ತಲುಪಿದ್ದೇನೆಲ್ಲಿಗೆ?
ಇದು ನನ್ನ ಗಮ್ಯವೆ?
ತಡಕಿ ನೋಡುವೆ ಕತ್ತಲೆಯಲಿ...

ಹೊರಟಾಗ ಮನದೊಳು
ಅರಳಿತ್ತೆ ಕನಸು?
ಹೊಸ ಗಮ್ಯದೊಳು
ಹೊಕ್ಕು ಅರಳಿತ್ತೆ ಮನಸು?

ತಲುಪಲೆಂದು ಪಯಣವೆ?
ಪಯಣಕೆಂದು ಪಯಣವೆ?
ಏತಕಾಗಿ ಈ ಯಾತ್ರೆ?
ಹುಡುಕಿ ತಡಕುತಿಹೆನು ಮನದೊಳು...