ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ - ಮಂಕುತಿಮ್ಮ||
ಡಿವಿಜಿಯವರ ಮಂಕುತಿಮ್ಮನ ಕಗ್ಗ _ ೭೪೨
ತಾತ್ಪರ್ಯ: ಜೀವನವನ್ನು ನಡೆಸಿಕೊಂಡು ಹೋಗುವ ಭಾರವು ಹಗುರವೆನಿಸಲು, ಹೆಚ್ಚಿನ ವಿದ್ಯೆಯಾಗಲೀ ತರ್ಕವಾಗಲೀ ಅಥವಾ ನಿಯಮಗಳನ್ನಾಗಲೀ , ಅನುಸರಿಸುವ ಅಗತ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಸಹನೆ, ಎಲ್ಲರೊಡನೆ ಸಹಬಾಳ್ವೆ ಹಾಗೂ ನಾವು ಮಾಡಿರುವ ಆಲೋಚನೆಗಳು ಹಾಗೂ ಕಾರ್ಯಗಳು ಸರಿಯೇ ತಪ್ಪೇ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವ ಅಭ್ಯಾಸ. ಇದು ಆತ್ಮದ ಹಿತಕ್ಕೆ ಒಳ್ಳೆಯದು ಅಥವಾ ವಿಹಿತವಾದದ್ದು
ಬಹಳಷ್ಟು ಬಾರಿ ಇವುಗಳನ್ನು ಓದಿದಾಗ ಹೊಸ ಲಹರಿ ತಾನಾಗಿಯೇ ಹುಟ್ಟಿಬರುತ್ತದೆ. ನಿಮ್ಮ ಅನಿಸಿಕೆಗಳನ್ನು ಬರೆಯಿರಿ.
#ಬಹುವಿದ್ಯೆಬಹುತರ್ಕ#ಮಂಕುತಿಮ್ಮನಕಗ್ಗ #kagga742 #bahuvidyebahutarka
No comments:
Post a Comment