ಚಕ್ರ ತಿರುಗೀ ತಿರುಗೀ ಮತ್ತೆ ಮೊದಲ ಜಾಗಕ್ಕೆ ಬರುವ ಹಾಗೆ ಪ್ರಪಂಚವೆಲ್ಲ ಸುತ್ತಿ, ಮೊದಲು ಕಂಡ ಕನಸಿನ ಬುಡಕ್ಕೆ ಬರುತ್ತೀವಂತೆ. ಅದು ಸತ್ಯವಾಗುತ್ತಿದೆ ಅನಿಸುತ್ತದೆ.
ಹಾಡು ಕೇಳುವುದು, ಹಾಡು ಹೇಳುವುದು, ಹಾಡು ಕಲಿಸುವುದು ಒಂದು ಹುಚ್ಚು. ಸಂಗೀತ ಕಲಿಯಲು ಸರಿಯಾದ ಸಮಯಕ್ಕೆ, ಸರಿಯಾದ ಗುರುಗಳು ಸಿಕ್ಕ ಬೇಕಾದರೆ ಒಂದು ಅದೃಷ್ಟ. ಬಹಳ ಸಮಯದ ನಂತರ ಅಂತಹ ಒಬ್ಬರು ಗುರುಗಳು ಸಿಕ್ಕಿ ಒಂದಷ್ಟು ದೂರ ಪ್ರಯಾಣ ಮಾಡಿದ್ದುಂಟು. ಕ್ರಮಿಸಬೇಕಾದ ದಾರಿ ಬಹಳಷ್ಟು ಇದೆ. ಬಂದಷ್ಟನ್ನು ಕೆಲವೊಬ್ಬರಿಗೆ ದಾಟಿಸುವ ಆಸೆ. ಯಾವಾಗ ಇರುತ್ತೇವೋ, ಹೇಗೆ ಇರುತ್ತೇವೆಯೋ, ಎಷ್ಟು ಸಮಯ ಇರುತ್ತೇವೆಯೋ ಯಾರಿಗೂ ತಿಳಿದಿಲ್ಲ. ಇದ್ದಾಗ ಇದ್ದುದನ್ನು ಇನ್ನೊಬ್ಬರಿಗೆ ಹಂಚಿದರೆ ಬರುವ ಮಜಾ ಬೇರೆ.
ಕೌನ್ಸೆಲಿಂಗ್, ಆಕ್ಯುಪ್ರೆಶರ್ ಜೊತೆ ಹಿಂದೆಂದೋ ಕಂಡ ಹಾಡು ಕಲಿಸುವ ಕೆಲಸವೂ ಸೇರಿದೆ. ಎರಡು ತಂಡಗಳಿಗೆ ಒಂದಷ್ಟು ಹಾಡನ್ನು ಹೇಳಿಕೊಟ್ಟಿದ್ದಾಗಿದೆ. ಮನಸ್ಸಿಗೆ ತುಂಬಾ ತೃಪ್ತಿ ಕೊಡುವ ಕೆಲಸ ಅದು.
ಮಂಕುತಿಮ್ಮನ ಕಗ್ಗ ಓದಬೇಕು, ಕಲಿಯಬೇಕು ಎನ್ನುವ ಆಸೆ ಬಹಳ ಸಮಯದಿಂದ ಹಾಗೆ ಉಳಿದಿತ್ತು. ಹೊಸ ಪ್ರಾಜೆಕ್ಟ್ - ವಾರಕ್ಕೊಂದು ಕಗ್ಗ.
ಪ್ರತಿವಾರವೂ ಕಡೆಯ ಪಕ್ಷ ಒಂದು ಕಗ್ಗ ಕಲಿಯುವ ಪ್ರಯತ್ನ. ಓದಿದಾಗ ಯಾವ ರಾಗ-ಭಾವ ಸೇರುತ್ತದೆಯೋ ಅದರಲ್ಲೇ ಹಾಡಿ ಹಂಚುವ ಪ್ರಯತ್ನ. ಹೆಚ್ಚು ಅಲಂಕಾರವಿಲ್ಲದೆ ಯೂಟ್ಯೂಬ್ ನಲ್ಲಿ ಹಾಡಿದ್ದನ್ನು ಹಾಕುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಿ, ನಿಮ್ಮ ಸಲಹೆಯನ್ನು ದಯವಿಟ್ಟು ತಿಳಿಸಿ..
ಲಿಂಕ್ ಇಲ್ಲಿದೆ :
For those who cannot understand Kannada, Mankutimmana kagga is a set of 945 of pearls of wisdom. People call it as essence of Bhagavad Gita. D.V. Gundappa, popularly known as DVG has authored the book. The language is slightly difficult to understand as it has halegannada or old kannada style of writing. But each of the kagga or poem has wonderful meaning to learn, to understand and implement in our lives. I am trying to learn one poem a week. I use the tune that comes to my mind while learning and share on my Youtube channel Bhaavasethu. There will be no decoration done on the video as the words and the meanings from each of the kagga / mukthaka carry jewels themselves.
#varakkondukagga #dvg #kaggakali #bhaavasethu
No comments:
Post a Comment